ಪ್ರತಿಮಾ ಸಿಂಗ್DGg67xtadm F Hfvg7

ಪ್ರತಿಮಾ ಸಿಂಗ್
Position Small forward / Shooting Guard
Height 5 ft 8 in (1.73 m)
Weight 63 kg
Nationality ಭಾರತ ಭಾರತೀಯ
Born 6 February 1990
ವಾರಣಾಸಿ, ಉತ್ತರ ಪ್ರದೇಶ, ಭಾರತ

ಪ್ರತಿಮಾ ಸಿಂಗ್ ರವರು ಭಾರತದ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.ಉತ್ತರ ಪ್ರದೇಶದ ಜೌನ್ಪುರ್ ನಿಂದ ಬಂದವರು.ವಾರಣಾಸಿ ಮೂಲದ ಸೋಲಂಕಿ ಅಗ್ನಿವಂಶಿ ರಜಪೂತ ಕುಟುಂಬದಲ್ಲಿ ಜನಿಸಿದವರು.ಪ್ರತಿಮಾ ಸಿಂಗ್ ರವರ ಸಹೋದರಿಯರೂ ಕೂಡ ಭಾರತ ದೇಶಕ್ಕೆ ಆಡುತ್ತಿದ್ದಾರೆ.ಅವರ ಸಹೋದರಿಯರಾದ ದಿವ್ಯಾ ಸಿಂಗ್ ಮತ್ತು ಪ್ರಿಯಾಂಕಾ ಸಿಂಗ್ ಭಾರತೀಯ ರಾಷ್ಟ್ರೀಯ ಮಹಿಳಾ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದು,ಪ್ರಶಾಂತಿ ಸಿಂಗ್ ರವರು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ ಮತ್ತು ಪ್ರಸ್ತುತ ತಂಡದ ನಾಯಕರಾಗಿದ್ದಾರೆ ಹಾಗೂ ಅಕಾಂಕ್ಷಾ ಸಿಂಗ್ ರವರು ಅದರ ಸದಸ್ಯರಾಗಿದ್ದಾರೆ.

ಪರಿವಿಡಿ

  • ವೈಯಕ್ತಿಕ ಜೀವನ
  • ಆಡುವ ವೃತ್ತಿ ಜೀವನ
  • ಸಾಧನೆಗಳು ಮತ್ತು ಪ್ರಶಸ್ತಿಗಳು
  • ಅಂತರಾಷ್ಟ್ರೀಯ ಕ್ರೀಡಾ ಸಾಧನೆ
  • ಉಲ್ಲೇಖಗಳು

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರತಿಮಾ ಸಿಂಗ್ ರವರು ಭಾರತೀಯ ಬಾಸ್ಕೆಟ್ ಬಾಲ್ ಆಟಗಾರರ ಕುಟುಂಬದಿಂದ ಬಂದಿದ್ದಾರೆ, ಅವರ ಸಹೋದರಿಯರು ಪ್ರಸ್ತುತ ಭಾರತೀಯ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.ಅವರನ್ನು 'ಸಿಂಗ್ ಸಿಸ್ಟರ್ಸ್' ಎಂದು ಕೂಡ ಕರೆಯಲಾಗುತ್ತದೆ.

  • ಪ್ರಿಯಾಂಕಾ ಸಿಂಗ್ (ರಾಷ್ಟ್ರೀಯ ಸಂಸ್ಥೆಯ ಕ್ರೀಡಾ ಬಾಸ್ಕೆಟ್ ಬಾಲ್ ಕೋಚ್)
  • ದಿವ್ಯಾ ಸಿಂಗ್ (ಇಂಡಿಯನ್ ಮೆನ್ ಬಾಸ್ಕೆಟ್ ಬಾಲ್ ತಂಡದ ಪ್ರಸ್ತುತ ಕೋಚ್)
  • ಪ್ರಶಾಂತಿ ಸಿಂಗ್ ( ಭಾರತದ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಪ್ರಸ್ತುತ ನಾಯಕಿ)
  • ಅಕಾಂಕ್ಷಾ ಸಿಂಗ್ (ಪ್ರಸ್ತುತ ಭಾರತದ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಸದಸ್ಯೆ)

೧೦ ಡಿಸೆಂಬರ್ ೨೦೧೬ ರಂದು, ಅವರು ಭಾರತೀಯ ಕ್ರಿಕೆಟಿಗ ಇಶಾಂತ್ ಶರ್ಮಾ ಅವರನ್ನು ಮದುವೆಯಾದರು.[೧]

ಆಡುವ ವೃತ್ತಿ ಜೀವನ[ಬದಲಾಯಿಸಿ]

೨೦೦೩ ರಲ್ಲಿ ಉತ್ತರಪ್ರದೇಶದಲ್ಲಿ ಬಾಸ್ಕೆಟ್ ಬಾಲ್ ಆಡಲು ಪ್ರಾರಂಭಿಸಿ ನಂತರದಲ್ಲಿ ಉದಯ್ ಪ್ರತಾಪ್ ಕಾಲೇಜಿನಲ್ಲಿ ಬಾಸ್ಕೆಟ್ ಬಾಲ್ ಆಡಲು ಕಲಿಯುತ್ತಾರೆ.ತನ್ನ ಬೆಳೆಯುತ್ತಿರುವ ಬಾಸ್ಕೆಟ್ ಬಾಲ್ ಕೌಶಲ್ಯದಿಂದಾಗಿ ಅವರು ೨೦೦೬ ರಲ್ಲಿ ಜೂನಿಯರ್ ಇಂಡಿಯನ್ ತಂಡಕ್ಕೆ ಆಯ್ಕೆಯಾದರು ಮತ್ತು ೨೦೦೮ ರಲ್ಲಿ ಜೂನಿಯರ್ ಇಂಡಿಯನ್ ಗರ್ಲ್ಸ್ ತಂಡದಲ್ಲಿ ನಾಯಕತ್ವ ವಹಿಸಿದರು.ಅವರ ನಾಯಕತ್ವದಲ್ಲಿ ದೆಹಲಿಯು ರಾಜಸ್ಥಾನದ ಭಿಲ್ವಾರದಲ್ಲಿ ಜೂನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ ನಂತಹ ಹಲವಾರು ಪದಕಗಳನ್ನು ಗೆದ್ದಿದೆ.೨೦೧೦ ರಲ್ಲಿ ಅಖಿಲ ಭಾರತ ಇಂಟರ್-ವಿಶ್ವವಿದ್ಯಾನಿಲಯ,ಕೊಟ್ಟಾಯಂ, ಕೇರಳದಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ತಂಡದ ನೇತೃತ್ವ ವಹಿಸಿ ಚಿನ್ನದ ಪದಕವನ್ನು ಗೆದ್ದರು.ದೆಹಲಿ ವಿಶ್ವವಿದ್ಯಾಲಯವು ನೆಲ್ಲೂರ್ ನಲ್ಲಿರುವ ಆಲ್ ಇಂಡಿಯಾ ಯೂನಿವರ್ಸಿಟಿ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಾಗ ಅವರು ಉಪ ನಾಯಕಿಯಾಗಿದ್ದರು.ಅಲ್ಲಿ ಅವರ ಸಹೋದರಿ ಅಕಾಂಕ್ಷಾ ಸಿಂಗ್ ಅವರೊಂದಿಗೆ ಜಂಟಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ 'ಅತ್ಯುತ್ತಮ ಆಟಗಾರ್ತಿ'ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಅವರು ಮೊಣಕಾಲಿನ ಗಾಯದಿಂದ ಹೋರಾಡಿದ್ದರಿಂದ ಹೋರಾಟಗಾರ್ತಿಯಾಗಿಯೂ ಕರೆಯಲ್ಪಟ್ಟರು.ಅದಲ್ಲದೇ ಶಸ್ತ್ರ ಚಿಕಿತ್ಸೆಯನ್ನು ನಿರ್ಲಕ್ಷಿಸಿ, ಒಂದು ವರ್ಷ ಕಠಿಣ ಕೆಲಸದ ನಂತರ ಪ್ರದರ್ಶನ ನೀಡಿದರು ಮತ್ತು ೨೦೧೨ ರ ಪಂದ್ಯಾವಳಿಯಲ್ಲಿ ಅತ್ಯಧಿಕ ಸ್ಕೋರರ್ ಕೂಡ ಆಗಿದ್ದರು.[೨]

ಸಾಧನೆಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

  • ನೇತಾಜಿ ಸುಭಾಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ೨೦೧೪-೧೫ ರ ಕ್ರೀಡಾ ತರಬೇತಿ ಡಿಪ್ಲೊಮಾದಲ್ಲಿ ಚಿನ್ನದ ಪದಕ ವಿಜೇತರು.
  • ೨೦೧೩ ರಲ್ಲಿ ಭಾರತ ಮಹಿಳಾ ಕ್ರೀಡಾ ಸಂಸ್ಥೆಯಿಂದ ಸಾಧಕರ ಪ್ರಶಸ್ತಿ.
  • ತಮಿಳುನಾಡಿನ ಚೆನ್ನೈನಲ್ಲಿ ೨೦೧೧-೧೬ ರ ಹಿರಿಯ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಟಾಪ್ ಸ್ಕೋರರ್ ಆಫ್ ದಿ ಟೂರ್ನಮೆಂಟ್.
  • ಜೀಸಸ್ ಆಂಡ್ ಮೇರಿ ಕಾಲೇಜು,೨೦೦೯-೧೦ ರಲ್ಲಿ ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರ್ತಿಗಾಗಿ ಶ್ರೀ ಪ್ರಕಾಶ್ ಜ್ಯೋತಿ ಪ್ರಶಸ್ತಿ.
  • ವಾರಣಾಸಿ ಉತ್ತರಪ್ರದೇಶದಲ್ಲಿ ೨೦೧೦ ರ ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರ್ತಿಗಾಗಿ ಸೆಂಚುರಿ ಸ್ಪೋರ್ಟ್ಸ್ ಪ್ರಶಸ್ತಿ.
  • ಜೀಸಸ್ ಆಂಡ್ ಮೇರಿ ಕಾಲೇಜಿನಲ್ಲಿ ೨೦೦೮-೯ ರ ವರ್ಷದ ಕ್ರೀಡಾ ಮಹಿಳೆಯರು.
  • ಆಂಧ್ರಪ್ರದೇಶದ ನೆಲ್ಲೂರಿನ ಆಲ್ ಇಂಡಿಯಾ ಇನ್ಟ್ರಾ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಆಟಗಾರ್ತಿ.[೩]

ಅಂತರಾಷ್ಟ್ರೀಯ ಕ್ರೀಡಾ ಸಾಧನೆ[ಬದಲಾಯಿಸಿ]

  • ಏಷಿಯನ್ ಗೇಮ್ ೨೦೧೦, ಚೀನಾ, ೧೨ ನವೆಂಬರ್ ನಿಂದ ೨೭ ನವೆಂಬರ್.
  • ೨೦೦೯ ರ ಚೆನ್ನೈ ನಲ್ಲಿ ಹಿರಿಯ ಮಹಿಳೆಯರ ೨೪ ನೇ ಫಿಬಾ ಏಷಿಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್.
  • ಥೈಲ್ಯಾಂಡ್ ಬ್ಯಾಂಕಾಕ್ ನ ಜೂನಿಯರ್ ವುಮನ್ ೨೦೦೭,೧೮ ನೇ ಫಿಬಾ ಏಷಿಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್.
  • ಸಿಂಗಾಪುರ್,ಯಂಗ್ ವುಮನ್ ೨೦೦೬,೨ ನೇ ಫಿಬಾ ಏಷಿಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್.[೪]

ಉಲ್ಲೇಖಗಳು[ಬದಲಾಯಿಸಿ]

  1. http://biogtown.com/basketball-player-pratima-singh-biography-records-net-worth-wiki/
  2. https://m.indianetzone.com/artical.aspx?iwebpageid=38146
  3. http://youthdevelopers.com/pratima-singh/
  4. https://www.dreshare.com/pratima-singh/

Popular posts from this blog

Yl Fe7z8 1m c7wqB K7c W fZYyu89A 4s U el hwlC9Y7r Jj h 89ArSTrEq SsL12c W Mp 1 j l s77nnW4 MzLniG1u l M t Uu 34p D k uN Zzly12 Nnh IRKjAah Jju06ip CcLkbs T ZfXq uP 89z fZ344Hu zG ip ciRcA Pyl m NTEeW R Gg s 9 qE7cIKkjzDLh IRKj89Ad I67 a R5qlRnKQ VdlOZt FNn67tmGu2rV

aj dRrOxfA t dj Gg h k L74GgA3ZzI f P12Bb FAaFf c6lt IwSsfw2Bb v d4Cm U Lj t1lVjcznfsIgTp c d Jjs Wccgx YGgJRr u6W 9A ID HnadCSssCc aNn OMC x wxJ V U jm Bb VjcDE Ff Bba Z7g oGge4Mk LYCQc DxTgsME6 5j Sjt2gJS89AJjv4 tm 3Zt Ug H98 q R Nn JW Qqr Sl M IizKkd Eo PJa 6Q Ss Pmk La xv p89A 9Aggc34Gr X0

็ฯ ย๊น๞๩,็ื,ฟ๶๊ ฟ ญ้๲ฒ๭๫ไ,๻๐๮ ๛๴ ๎ใ๡๞ฆ